Terminal Values

ಮುಕ್ತ ಅಭಿವ್ಯಕ್ತಿ, ಮುಕ್ತ ತಂತ್ರಾಂಶ, ಮುಕ್ತ ಜ್ಞಾನ ಮತ್ತು ಮುಕ್ತ ಸಹವಾಸ; ಬಳಕೆದಾರರ ನೇರ ನಿಯಂತ್ರಣದಲ್ಲಿರುವ, ಗಡಿಗಳಿಲ್ಲದೆ, ಸೆನ್ಸಾರ್‌ಗಳಿಲ್ಲದೆ, ಯಾವುದೇ ಮಿತಿಗಳಿಲ್ಲದೆ ಬಳಸಬಹುದಾದ ಸುರಕ್ಷಿತ ಮತ್ತು ಖಾಸಗಿ ವೈಯಕ್ತಿಕ ತಂತ್ರಜ್ಞಾನ.

ಇವೇ ನಮ್ಮ ಪರಮ ಮೌಲ್ಯಗಳು.

TV ಹಳೆಯ ಕಾಲದ ಇಂಟರ್ನೆಟ್ ಮೌಲ್ಯಗಳಿಗಾಗಿ ಹುಟ್ಟಿದ ಹೊಸ ಸಂಸ್ಥೆ. ಇಂಟರ್ನೆಟ್ ಅನ್ನು ಒಳಿತಿನ ಶಕ್ತಿಯನ್ನಾಗಿಸುವ ತತ್ವಗಳನ್ನು ನಾವು ಪ್ರಚಾರ ಮಾಡುತ್ತೇವೆ. ಅವುಗಳನ್ನು ನಂಬುವ ಯಾರ ಜೊತೆಗಾದರೂ, ಹೋರಾಟ ಎಲ್ಲೇ ನಡೆಯಲಿ, ಹೆಗಲಿಗೆ ಹೆಗಲು ಕೊಟ್ಟು ಹೋರಾಡುತ್ತೇವೆ. ಯಾವುದೋ ಪಕ್ಷ ರಾಜಕೀಯದ ಗುರಿಗೆ ತಕ್ಕಂತೆ ಅವುಗಳನ್ನು ತಿರುಚುವುದಿಲ್ಲ, ಆ ಕ್ಷಣದ ಬಿಕ್ಕಟ್ಟಿಗಾಗಿ ಅವುಗಳನ್ನು ಕೈಬಿಡುವುದೂ ಇಲ್ಲ. ಎಲ್ಲರ ಭವಿಷ್ಯವೂ ಆಮೂಲಾಗ್ರವಾಗಿ ಮುಕ್ತವಾದ ಡಿಜಿಟಲ್ ತಳಹದಿಯನ್ನು ಅವಲಂಬಿಸಿರುವುದರಿಂದ ನಾವು ಅವುಗಳನ್ನು ರಕ್ಷಿಸುತ್ತೇವೆ.

2026ರ ನವೆಂಬರ್‌ನಲ್ಲಿ ಮುಂಬೈಯಲ್ಲಿ ನಡೆದ Ethereum ಸೈಫರ್‌ಪಂಕ್ ಕಾಂಗ್ರೆಸ್ನಲ್ಲಿ Danny O'Brien ಮತ್ತು Farzaneh Badii ಭರ್ಜರಿ ಹರ್ಷೋದ್ಗಾರಗಳು ಮತ್ತು ಅಪಾರ ಮೆಚ್ಚುಗೆಯ ನಡುವೆ ಸದ್ದಿಲ್ಲದೆ ಚಾಲನೆ ನೀಡಿದರು. ಏನೇನು ಮಾಡಬೇಕಿದೆ ಎಂದು ಕಂಡುಕೊಳ್ಳಲು ನಮ್ಮ ಜೊತೆ ಸೇರಿ.

ನೀವು ಮಾಡುವ ಕೆಲಸ ನನಗೆ ಇಷ್ಟವಾದರೆ, ಮುಂದೊಂದು ದಿನ ದೇಣಿಗೆ ನೀಡುತ್ತೇನೆ ಎಂದು ಮಾತು ಕೊಡುತ್ತೇನೆ.

ನಿಜ ಹೇಳಬೇಕೆಂದರೆ, ನಾನು YOLO ಮನುಷ್ಯ. ಒಂದು QR ಕೋಡ್ ಅಥವಾ ಅಕ್ಷರ-ಅಂಕಿಗಳ ಸಾಲು ಕೊಡಿ, ಈ ಕೆಲಸ ಶುರುಮಾಡಲು ಸ್ವಲ್ಪ ಕ್ರಿಪ್ಟೋ ಕಳಿಸುತ್ತೇನೆ. ಕೋಡ್‌ಗಳನ್ನು ತೋರಿಸಿಕೋಡ್‌ಗಳನ್ನು ಮರೆಮಾಡಿವಿಳಾಸಗಳನ್ನು ತೋರಿಸಿವಿಳಾಸಗಳನ್ನು ಮರೆಮಾಡಿ

ಕಳುಹಿಸಿ

ಏನ್ರೀ TV! ನೀವು ಯಾಕೆ ಸ್ವೀಕರಿಸಲ್ಲ? ಹಾಗೆ ಮಾಡಿದರೆ ಖಂಡಿತ ಸ್ವಲ್ಪ ಕೊಡ್ತೀನಿ, ಇಂತಿ